ಲೆಫ್ಟಿನೆಂಟ್ ಜನರಲ್ ಜಿಎವಿ ರೆಡ್ಡಿ ಅವರು ಭಾರತೀಯ ಸೇನೆಯ ನಿವೃತ್ತ ಜನರಲ್ ಅಧಿಕಾರಿ. ಇವರು ಅತಿ ವಿಶಿಷ್ಟ ಸೇವಾ ಪದಕ, ಶೌರ್ಯ ಚಕ್ರ ಹಾಗೂ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಅವರು ರಕ್ಷಣಾ ಗುಪ್ತಚರ ಸಂಸ್ಥೆಯ (ಭಾರತ) ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅವರು ಈ ಹಿಂದೆ ಗಯಾ ಅಧಿಕಾರಿಗಳ ತರಬೇತಿ ಅಕಾಡೆಮಿಯ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದ್ದರು. ರೆಡ್ಡಿ ಅವರು ಮೇಜರ್ ಜನರಲ್ ಆಗಿ, ಇನ್ಸ್ಪೆಕ್ಟರ್ ಜನರಲ್ ಅಸ್ಸಾಂ ರೈಫಲ್ಸ್ (ಈಸ್ಟ್) (ಐ. ಜಿ. ಎ. ಆರ್ ಈಸ್ಟ್) ಸಿಲ್ಚಾರ್ ನಲ್ಲಿದ್ದರು. ಅವರು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು, ೧೯೮೬ ರ ಮಾರ್ಚ್ ೮ ರಂದು ಜಾಟ್ ರೆಜಿಮೆಂಟಲ್ಲಿ ನಿಯೋಜಿಸಲ್ಪಟ್ಟರು. == ಉಲ್ಲೇಖಗಳು ==